Monday, June 13, 2016

Excerpts from ಡಿಜಿಟಲ್ ಕ್ರಾಂತಿ ಮತ್ತು, ಭಾರತ

Excerpts from ಡಿಜಿಟಲ್ ಕ್ರಾಂತಿ ಮತ್ತು ಭಾರತ and a short interview of mine

 Sunday Supplement of Kannada Prabha June 12, 2016, 

http://epaper.kannadaprabha.in/Article.aspx?eid=31848&articlexml=12062016101004#

http://epaper.kannadaprabha.in/Article.aspx?eid=31848&articlexml=12062016104007

ಇ-ಆಡಳಿತದ ಮೊದಲ ಘಟ್ಟ ಮುಟ್ಟಿದ್ದೇವೆ
ಭಾರತಕ್ಕೆ ಹೊಸ ಚೈತನ್ಯ ತುಂಬಿದೆ ಡಿಜಿಟಲ್ ಕ್ರಾಂತಿ. ಹಾಗೆಯೇ ಜಾಗತಿಕವಾಗಿ ಡಿಜಿಟಲ್ ಕ್ಷೇತ್ರದ ಹಲವು ಸಾಧನೆಗಳಿಗೆ ಭಾರತವೂ ಕಾಣ್ಕೆ ನೀಡಿದೆ. ಬೃಹತ್ ಗಾತ್ರದ ಕಂಪ್ಯೂಟರ್ ಕಾಲದಿಂದ ಎಲ್ಲ  ಕೆಲಸಗಳೂ ಸ್ಮಾರ್ಟ್ ಫೋನ್ ಗಳಲ್ಲಿ ನಡೆಯುತ್ತಿರುವ ಈ ಕಾಲದ ವರೆಗೆ ತಂತ್ರಜ್ಞಾನ್ ಲೋಕದ ಬೆಳವಣಿಗೆಯನ್ನು ಶಿವಾನಂದ ಕಣವಿಯವರು ಕಂಡಿದ್ದಾರೆ. ಈ ಬೆಳವಣಿಗೆಗಳ ಹಲವು ಸಂಗತಿಗಳನ್ನು ಕುರಿತು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕ್ರಾಂತಿ ಕೊಟ್ಟ ಕೊಡುಗೆ ಏನು? ಅದರಿಂದ ಏನೆಲ್ಲ ಸಾಧ್ಯವಾಗಿದೆ ಎಂಬ ಬಗ್ಗೆ ಕಣವಿಯವರು ಇಲ್ಲಿ ಮಾತನಾಡಿದ್ದಾರೆ.

.

1. ಡಿಜಿಟಲ್ ಭಾರತ ಎಂದರೆ ಥಟ್ಟನೆ ನಿಮ್ಮ ಕಣ್ಣ ಮುಂದೆ ನಿಲ್ಲುವ ಚಿತ್ರ ಯಾವುದು

ಕುಂಭ ಮೇಳದಲ್ಲಿ ಭಸ್ಮ ದಿಂದ ಆಭೂಷಿತ ಒಬ್ಬ ಅರೆ ನಗ್ನ ಸಾಧು ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿರುವ ಚಿತ್ರ

2. ಸಾಮಾನ್ಯ ಭಾರತೀಯನಿಗೆ ಡಿಜಿಟಲ್ ಕ್ರಾಂತಿಯಿಂದ ನಿಜವಾಗಿಯೂ ಏನು ಸಿಗುತ್ತಿದೆ?

ವ್ಯಾಪಾರ, ವ್ಯವಹಾರ, ಕೈಗಾರಿಕೋದ್ಯಮ, ಕೃಷಿ, ಆಡಳಿತ, ಶಿಕ್ಷಣ, ಆರೋಗ್ಯ, ಮನೋರಂಜನೆ, ಪತ್ರಿಕೋದ್ಯಮ ಮುಂತಾದ ಅನೇಕ ರಂಗಗಳಲ್ಲಿ ಕಳೆದ ಸುಮರು ೨೦ ವರ್ಷಗಳ ಹಿಂದೆ ಆರಂಭವಾದ  ಡಿಜಿಟಲ್ ಕ್ರಾಂತಿಯಿಂದ ಅಪಾರ ಜನಹಿತದ ಬದಲಾವಣೆಗಳು ಆಗಿವೆ ಆದರೆ ಮುಖ್ಯವಾಗಿ ೧೦೦ ಕೋಟಿಗಿಂತೂ ಹೆಚ್ಚು ಜನರನ್ನು ತಟ್ಟಿದ್ದು ಸಂವಹನ ಕ್ರಾಂತಿ ಎಂದರೆ ಉತ್ಪ್ರೇಕ್ಷೆ ಆಗಲಾರದು

3.
ಭಾರತದಲ್ಲಿ ಆದ ತಂತ್ರಜ್ಞಾನದ ಕ್ರಾಂತಿ ನಿಜಕ್ಕೂ ಯಾವ  ರೀತಿಯ ಬದಲಾವಣೆಗೆ ಕಾರಣವಾಗಿದೆ?

ಆಡಳಿತ ಜನರತ್ತ ಬರಲು ಸಾಧ್ಯವಾಗಿದೆ, ಆರೋಗ್ಯ ಕ್ಷೇತ್ರದ ಪ್ರತಿಯೊಂದು ಶಾರೀರಿಕ ಪರೀಕ್ಷೆಗಳೂ ಇಂದು  ಡಿಜಿಟಲ್ ತಂತ್ರಜ್ಞಾನವನ್ನು ಅವಲಂಬಿಸಿವೆ, ವೈಜ್ಞಾನಿಕ ಅನುಸಂಧಾನಕ್ಕೆ ಅನೇಕ ಹೊಸ ಉಪಕರಣಗಳು ಲಭ್ಯವಾಗಿವೆ, ಬ್ಯಾಂಕು ಮತ್ತು ಮಾರುಕಟ್ಟೆಗಳ ವ್ಯವಹಾರ ತ್ವರಿತ ಮತ್ತು ಪಾರದರ್ಶಕ ವಾಗಿವೆ, ಎಲ್ಲ ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಪ್ರಕಾಶನ ರಂಗಗಳಲ್ಲಿ ಸ್ಫೋಟವೇ ಆಗಿದೆ. 
ಸಂಕ್ಷಿಪ್ತವಾಗಿ ಹೇಳಬೆಕೆಂದರೆ ಭಕ್ತಿ ಚಳುವಳಿ ಹೇಗೆ ಮಾನವ ಮತ್ತು ಅವನ ದೇವರ ನಡುವೆ ಅಡ್ಡಿಯುಂಟು ಮಾಡುತ್ತಿದ್ದ ಮಧ್ಯಸ್ಥ ಪೂಜಾರಿಗಳನ್ನು ದಾಟಿ ಮುಂದೆ ಹೋಯಿತೋ ಅದೇ ತರಹ ಮಾನವ ವ್ಯವಹಾರಗಳಲ್ಲಿ ಮಧ್ಯಸ್ಥರನ್ನು ಅನಾವಶ್ಯಕ ಮಾಡಿದೆ ಡಿಜಿಟಲ್ ತಂತ್ರಜ್ಞಾನ. ಅದರೊಂದಿಗೆಯೇ ಹಳೆಯ ಮಾನವ ಕರುಳು ಬಌಗಳಾದ ಕುಲ, ಜಾತಿ, ಊರು, ರಾಷ್ಟ್ರಮುಂತಾದವುಗಳ ಸಂಕುಚಿತ ಮೇರೆಗಳನ್ನು ಮೀರಿ ಹೊಸ ಕರುಳು ಬಌಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ಡಿಜಿಟಲ್ ತಂತ್ರಜ್ಞಾನ ನಿರ್ಮಾಣ ಮಾಡಿದೆ.

4.
ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನವೇನು? ಏಕೆ?

ಡಿಜಿಟಲ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಅನೇಕ ಭಾರತೀಯರು ಅಪಾರ ಮೂಲಭೂತ ಕೊಡುಗೆಗಳನ್ನು ಕೊಟ್ಟಿದ್ದಾರೆ. ಮೂಲ ಪುಸ್ತಕವನ್ನು,( Sand to Silicon: The amazing story of digital technology) ಬರೆಯುವದಕ್ಕೆ ಪ್ರಮುಖ ಪ್ರೇರಣೆಗಳಲ್ಲಿ ಇಂಥ ಭಾರತೀಯರನ್ನು ಗುರುತಿಸುವದೂ ಆಗಿತ್ತು. ಇದಲ್ಲದೆ ವೈದ್ಯಕೀಯ, ಜೈವಿಕ, ಬಾಹ್ಯಾಕಾಶ, ಪರಮಾಣು ಮತ್ತಿತರ ಕ್ಷೇತ್ರಗಳಲ್ಲಿ ಮಂಚೂಣಿಯ ಕಾರ್ಯವನ್ನು ಭಾರತೀಯ ವಿಜ್ಞಾನಿ ಮತ್ತು ತಂತ್ರಜ್ಞಾನಿಗಳು ನಮ್ಮ ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಮಾಡುತ್ತಿದ್ದಾರೆ.

5. ಆಡಳಿತದಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಏನಾಗಬೇಕಿದೆ

ಈಗ ಅನೇಕ ಸಾರ್ವಜನಿಕ ಸೇವೆಗಳನ್ನು ಕಚೇರಿ-ಕಾರ್ಯಾಲಯಗಳಿಗೆ ಹೋಗಿ ಗಂಟೆಗಟ್ಟಲೇ ಕಾಲವ್ಯಯಿಸಿ ನಂತರ ಪಡೆದುಕೊಳ್ಳ ಬೇಕಾಗಿಲ್ಲ. ಆನೇಕ ಸರಕಾರಿ ದಾಖಲೆಗಳು ಮತ್ತು ಸೂಚನೆಗಳು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಮೂಲಕ ಪಡೆಯಬಹುದು. ಕೇಂದ್ರ, ರಾಜ್ಯ ಮತ್ತು ಮಹಾಪಾಲಿಕೆಗಳವರೆಗೆ ಸುಮಾರು ಎಲ್ಲಾ ಸರಕಾರೀ ಸಂಸ್ಥೆ ಅಥವಾ ನಿಗಮಗಳು ಅಂತರ್ ಜಾಲದಲ್ಲಿ ಉಪಸ್ಥಿತವಾಗಿವೆ. ಒಂದು ದೃಷ್ಟಿಯಿಂದ ನಾವು ಇ-ಆಡಳಿತದ ಮೊದಲ ಘಟ್ಟವನ್ನು ಮುಟ್ಟಿದ್ದೇವೆಯೆಂದು ಹೇಳಲು ಚಿಂತೆಯಿಲ್ಲ. ಕೆಲ ಆಡಳಿತ ಕ್ಷೇತ್ರಗಳಲ್ಲಿ ಭಾರತ ಇಂದು ಜಾಗತಿಕವಾಗಿ ಮಂಚೂಣಿಯಲ್ಲಿದೆ ಮತ್ತು ನಮ್ಮ ಇ-ಆಡಳಿತದ ಸಾಧನೆಗಳನ್ನು ಮಾದರಿಯೆಂದು ಅಧ್ಯಯನ ಮಾಡಲು ಅನೇಕ ದೇಶಗಳಿಂದ ಬರುವ ತಂಡಗಳನ್ನು ನಾನು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಯಲ್ಲಿ ಉಪಾಧ್ಯಕ್ಷನಾಗಿ ೧೦ ವರುಷ ಕೆಲಸ ಮಾಡಿದಾಗ ಅನೇಕ ಬಾರಿ ಭೇಟಿಯಾಗಿದ್ದೇನೆ. 

ಈಗ ನಾವು ಮುಂದಿನ ಘಟ್ಟಕ್ಕೆ ಮುನ್ನಡೆಯ ಬೇಕು. ಅದೆಂದರೆ ನಮ್ಮ ಇ-ಆಡಳಿತ ಜಾಲತಾಣಗಳ ಸಾರ್ವಜನಿಕ ಆಡಿಟ್ ಆಗಬೇಕು ಅವುಗಳ ಕುಂದು ಕೊರತೆಗಳನ್ನು ನಿವಾರಿಸಿ ಪುನರ್ ವಿನ್ಯಾಸ ಮಾಡಬೇಕು.
 ಅತಿ ಮುಖ್ಯ ವಿಷಯವೆಂದರೆ ನಮ್ಮ ಆಡಳಿತದ ಮೂಲ ಸೂತ್ರಗಳು ಮತ್ತು ನಿಯಮಗಳೆಲ್ಲ ೧೮೫೭ರ ಕ್ರಾಂತಿಯ ನಂತರ ಬ್ರಿಟಿಶ್ ವಸಾಹತುವಾದಿಗಳು ಮಾಡಿದ್ದವು. ಇನ್ನೂ ವರೆಗೆ ಅದೇ ವಸಾಹತುವಾದಿ ಆಡಳಿತದ ಚೌಕಟ್ಟಿನಲ್ಲಿ ನಮ್ಮ ಆಡಳಿತ ಸಿಕ್ಕು ಬಿದ್ದಿದೆ. ಆದ್ದರಿಂದ ಇಂಥ ವಸಾಹತುವಾದಿ ಆಡಳಿತ ಸೂತ್ರ ನಿಯಮಗಳನ್ನು ಕಂಪ್ಯೂಟರ್ ಕರಿಸುವದಕ್ಕಿಂತ ನಾವೆಲ್ಲ ಗಂಭೀರವಾಗಿ ಆದಳಿತ ಸೂತ್ರಗಳನ್ನು ಪುನರಾವಲೋಕಿಸಿ ಕಂಪ್ಯೂಟರ್ ಕರಣದ ಜೊತೆಗೆ ಅವುಗಳನ್ನು ಜನಪರ ಮಾಡುವ ಅತ್ಯಾವಶ್ಯಕತೆ ಇದೆ.

Friday, May 20, 2016

Komagata Maru and Justin Trudeau apology

Justin Trudeau, PM of Canada apologized in the Canadian parliament  for the Komagata Maru incident in 1914 and tweeted the same.

But what really happened in 1914 at Vancouver and later Kolkata and all over India with the Ghadar Uprising in 1915...Read Madhavi Thampi explaining in Ghadar Jari Hai....

Ghadar Jari Hai, Vol 3, Issue 1&2, pp 29-30, 2009

Stirring legacy of the Komagata Maru

Madhavi Thampi tells us about an episode in the history of colonialism that enraged Indians abroad and in India for the callous and discriminatory treatment meted out to an enslaved people.

 Passengers of Komagata Maru

The struggle against the British colonial rulers was joined by hundreds of streams of Indian people, including Indians abroad.  Poverty and destitution, the drying up of economic opportunities at home, as well as political oppression, had compelled millions of Indians in the colonial period to uproot themselves from their homeland and make their way to places as far away as Mauritius and China, Africa and the Caribbean islands, Australia and the Americas.  However their status, as people who came from a land that had been occupied and enslaved by a foreign power, did not leave them wherever they went.  Abused by racist and colonial authorities in the places they moved to, with strong emotional ties to their communities back home, and with their horizons broadened by their experience as migrants, Indians who went abroad were among the most militant fighters for India’s freedom. The episode of the Komagata Maru, that took place 95 years ago, is a landmark in the anti-colonial struggle that enshrined this spirit of the Indian people.  The Komagata Maru was a Japanese steamship that was chartered in Hong Kong in 1914 to carry aspiring Indian emigrants, mainly from Punjab, to Vancouver, Canada.  As part of the process of conquering new lands and opening them up for economic exploitation, colonialism and imperialism had always sought to use labour from colonies and dependent countries in Asia and Africa.  After the abolition of the slave trade in the 19th century, labour from India and China was in great demand to work on plantations, railroads, lumber yards, mines, and so on.  This gave rise to the notorious coolie trade, in which lakhs of men and women were shipped off in the most barbaric conditions to work as virtually bonded labour in other colonies. 

However, from the beginning of the 20th century, discriminatory immigration laws began to be applied, first against the Chinese, and then against Indians also, in those places.  Along with these laws, racist campaigns were deliberately launched which warned of “brown-skinned” and “yellow-skinned” immigrants “flooding” those countries and taking over all jobs.  The idea here was not to stop the flow of immigrants from India and China, whose labour was still very much needed by the capitalists in those countries, but to tightly control it.  It was a useful way of engendering divisions among the workers of those countries on the basis of their place of origin, and of preventing immigrants from standing up for their rights out of fear of being persecuted and deported. To put the squeeze on potential Indian immigrants, the government of the British colony of Canada passed two Orders-in-Council in 1908.  One raised the money requirement for the immigrants at one go from $25 per person to $200 – a huge sum of money in those days.  The other stipulated that only those who sailed to Canada in a “continuous journey” from their place of origin were eligible to be considered for immigrant status.  This was a near impossibility for those coming from India.  Meanwhile, the US government also issued regulations to curtail the flow of immigrants from India.

A large number of Indians had by this time made their way to various places in China and Japan in the expectation of going onward from there to North America for work.  Stopped from proceeding further, they had to bide their time for months on end with little or no income. 

In the words of Gurdit Singh, the businessman who hired the Komagata Maru: “When I came to Hong Kong for some private business in January 1914, I could not bear the grief and hardship of the Vancouver emigrants who had been waiting in the Sikh temple in Hong Kong.  It was a matter of injustice and darkness, I thought, because our brethren were passing their days in a miserable state for the hope of arriving at Vancouver while staying here for one year and spending money for their eating from their own pockets.”

After finally getting clearance from the colonial authorities in Hong Kong to set sail, the Komagata Maru left for Vancouver on April  4,1914, picking up more passengers at Shanghai and Japan on the way, a total of 337 passengers.

When they learned of the departure of the ship from Hong Kong, the Canadian government went into a fever of preparations to forcibly prevent the ship from docking at Vancouver and unloading its Indian passengers.  However, the Indians resident in Vancouver, numbering not more than about 2,000, also made their preparations to support their fellow countrymen in every way they could.  When the Komagata Maru reached Canadian waters in May 1914, it was ordered to turn back at once.  After all that they had endured to reach Canada, the passengers refused.  A stalemate ensued, with the Canadian authorities trying to use every means to force the ship and its passengers to leave, including denying food and essential supplies, while the Indian community in Vancouver tried their best to send food and supplies and also to fight a legal battle on behalf of the ship passengers.  This was an extraordinary display of courage and defiance, as well as love for their fellow countrymen, by the Indian community.

In the end, after two months confined to the ship, the Indians on board had no choice but to turn back.  The events in Vancouver had among other things raised the level of consciousness of the ordinary working people on board the ship about the real nature of imperialism and about the necessity to free India from the chains of colonial rule.  When the ship approached Calcutta on September 26, they were met by a British gunboat which did not allow the ship to dock at Calcutta as planned, but took it to Budge Budge.  The passengers wanted to take out a procession from the ship to the authorities in the city to register their protest at their treatment.  However, the British authorities had other plans.  Treating them as criminals, they tried to force all the passengers, irrespective of what their plans were, to proceed straightaway to Punjab in a special train.  When the passengers tried to march in a procession anyway, they were met with brutal force.  More than a score of passengers died in police firing, while many more were injured.

The news of the brutal treatment of the Komagata Maru passengers both at Vancouver and when they returned to India aroused widespread fury against the British rulers.  It was directly responsible for the mutiny in 1915 of the Indian regiment posted at Singapore, the first such rebellion of a unit of the Indian armed forces after 1857.  It also led to large numbers of Indians from North America, China and other places volunteering to return to India and join the campaign led by the Hindustani Ghadar Party to overthrow British rule by force of arms.

The Komagata Maru episode holds important lessons for us Indians today.  The nature of imperialism has not changed, even if direct colonial rule over India and other countries has ended.  When they want, the capitalists in various countries use the state to manipulate immigration laws and regulations to either entice labour from poorer countries to come and work their enterprises, or to discourage them when that suits their interests.  Migrant workers, be they from India or other countries, have no rights and are always under pressure to accept whatever conditions are imposed on them.  Far from defending their rights, the present-day Indian state shows only lip sympathy for these hapless working people from our country.

The Komagata Maru episode  shows the unconquerable spirit of Indian people to unite and fight against injustice, whether they are in India or abroad. 

Justin Trudeau @JustinTrudeau May 19
No words can fully erase the suffering of Komagata Maru victims. Today, we apologize and recommit to doing better.

Saturday, May 7, 2016

Sand to Silicon in Kannada, ಡಿಜಿಟಲ್ ಕ್ರಾಂತಿ ಮತ್ತು ಭಾರತ

It gives me great pleasure to announce that the Kannada version of my book "Sand to Silicon: The amazing story of digital technology" -- ಡಿಜಿಟಲ್ ಕ್ರಾಂತಿ ಮತ್ತು ಭಾರತ , has been published by Govt of Karnataka's Kuvempu Bhasha Bharati Pradhikara (http://kuvempubhashabharathi.org/kannada/),which publishes classics translated from other languages into Kannada and vice versa.
The book has been translated by Dr Y C Kamala and will be available soon in book stores.
Will keep you posted on book release programs from time to time.
Thanks for your encouragement and support.

Thursday, April 14, 2016

Indian Intellectual Traditions and Modern Physics

Comments at NIAS symposium on "Modern Physics and Ancient Insights on Reality: A Dialogue across Traditions" , Dec 12, 2015--Shivanand Kanavi

I am not an expert in Indian darshanas. I am speaking here as a physicist. We have had very interesting remarks earlier by experts in Jaina, Bouddha, Advaita, Yoga and Kashmir Shaivite darshanas. I think while it may not be prudent to look for modern physical ideas in ancient darshanas, we can still learn a lot from them.
For example Samkhya posits that both Prakruti and Purusha are Nitya that is eternal, which basically rules out the creator and moment of creation, which are anyway very problematic for scientists. In fact Samkhya is Nirishwara darshana.
It also speaks of the dialectical interaction between matter and consciousness leading to the existence of our many splendored universe. The Prakruti-Purusha relationship is described as one that exists between a lame and a blind person. The lame (Purusha) can see but cannot walk (act) where as the blind (Prakruti) can walk (act) but cannot see. Thus either one on their own lead to nothing, where as the two together lead to the universe.
Similarly the concept of Svabhava in Samkhya is very similar to the Newtonian Law of Nature or properties of matter.
It is a known fact that the concept of one cause producing an effect the normal causality is too simplistic to explain complex phenomenon and if misapplied can lead to conspiracy theories. Here the Buddhist theory of Pratitya Samutpada of many causes leading to an effect provides a more realistic explanation of complex phenomena.
The Vaiseshika, Jaina and Ajivika theories of Atomism provide a very practical way out of the conundrum of continuum and posit a discrete structure of matter, space and time. This is also dictated by common sense which enables comparison of two entities like a stone pebble and a mountain because both have different amounts of finite and discrete matter in them.
The concept that nothing is static but everything in this universe is in motion expressed beautifully in Isho Upanishad as "Jagatyam jagat" is fully supported by modern physics as against the old Newtonian concepts of absolute space and time and state of complete rest and motion.
The methodology of proving any statement strictly according to Pramanas as expressed in Nyaya is again the basis of modern scientific method. Especially if you consider Veda or Agama pramana as Apta Vakya (reliable source) of Samkhya, which is certainly not infallible as it is after all paurusheya or human in origin.
The Jainas have profoundly expounded the concept of relativism of truth through Anekantavada illustrated beautifully by the parable of blind men and the elephant also thereby illustrating the asymptotic nature of cognition. Anekantavad amply allows for diversity of opinion, humility and mutual respect which are the basis of a rational discourse as well as democracy.
I once again thank the organisers who gave me the opportunity to participate in this symposium and listen so many experts in Darshanas from which I have benefitted.

Thursday, March 10, 2016

Obit: Raju Vasanthraj

Raju Vasanthraj: Man of many parts 

My dear friend Raju Vasanthraj ( Rv Raj on Facebook) shocked all with his sudden passing away yesterday (March 9, 2016). Looking back at his text messages from Beijing only two months ago and all the conversations we had it looks unreal that he is no more with us !
A voracious reader, alumnus of Oxford and Berkeley. He was on the outside shockingly hawkish and sectarian but inside always going out of the way to help many. The twinkle in his eyes never let out whether he was a genuine hawk or was just pulling your leg for shock value.
A real backroom boy and undertook many quiet missions in both Dr Man Mohan Singh's PMO for the Knowledge Commission and now with the present PM, in the strategic area with NSA but he always did it all pro bono, as service to the country. He took his projects seriously and did all the necessary research and legwork tirelessly but never hankered for the lime light.
Rubbed shoulders with many high and mighty in business and finance and later politics and even International leaders but he was equally affable and down to earth talking to a man on the street or his driver.
He had a vast collection of books on history, philosophy, strategic studies and many other subjects. He greatly welcomed the onset of ebooks since it saved him the library space and soon had a veritable collection of ebooks. Whenever he liked a book he would lend it to me generously. Or if I was looking for a particular one he would use all his contacts here and abroad to procure it.
He was a foodie and introduced me to many a gem in the bylanes of Mumbai, Bengaluru and Chennai. But he was a fantastic cook too. Especially south indian savouries. Once he presented my wife Radhika with his Thatte and Khara Boondi and completely floored all of us with its incredible quality. He was in the process of writing a cookbook of authentic Tam-Brahm food. He had already edited an Ayurvedic Cookbook written by someone else.
I tried many times to induce him to translate his vast erudition into writing. But I was successful only once. True to his mischievous self he signed it off with a pseudonym " Shaniyan" (:-).

He had also been recently convinced by a well known publishing house in UK to research and write a book on the history of global reach of Tamil entrepreneurs since the ancient times.
He leaves behind a young family and my heart goes out to them.
May he rest in peace.

--Shivanand Kanavi

Tuesday, March 8, 2016

Who invented email?

Who invented email?
Shivanand Kanavi

There are many sides to the story of email. In fact there is another Indian who pioneered email communication in 1972 (before Ray Tomlinson or Shiva Ayyadurai) while working on the Arpanet at MIT with File Transfer Protocol FTP (RFC 114) Abhay Bhushan

This 'controversy' reminds me of a quote by Paul Baran (who first articulated packet switching --the basis of Internet, in 1960-62 at RAND):
“The process of technological developments is like building a cathedral. Over the course of several hundred years: people come along, lay down a block on top of the old foundations, saying, ‘I built a cathedral.’ Next month another block is placed atop the previous one. Then a historian asks, ‘Who built the cathedral?’ Peter added some stones here and Paul added a few more. You can con yourself into believing that you did the most important part, but the reality is that each contribution has to follow on to previous work. Everything is tied to everything else. Too often history tends to be lazy and give credit to the planner and the funder of the cathedral. No single person can do it all, or ever does it all.” 
—PAUL BARAN, inventor of packet switching
Baran’s wise words sum up the pitfalls in telling the historical story of technology. Individual genius plays a role but giving it a larger-than-life image robs it of historical perspective.
In India, there was a tradition of collective intellectual work. Take, for instance, the Upanishads, or the Rig Veda; no single person has claimed authorship of these works, much less the intellectual property rights. Most ancient literature is classified as smriti (memory, or, in this case, collective memory) or shruti (heard from others). Even Vyasa, the legendary author of the Mahabharat, claimed that he was only a raconteur. Indeed, it is a tradition in which an individual rarely claims “to have built the cathedral”.

Ray Tomlinson: The man who put @ in your email

The man who put @ in your email

On Saturday March 5, Ray Tomlinson 74, one of the inventors of email, passed away. RIP

"A form of email was already known to users of time-sharing computers, but with Arpanet coming into being, new programs started popping up for sending mail piggyback on File Transfer Protocol. An email program that immediately became popular due to its simplicity was sendmsg, written by Ray Tomlinson, a young engineer at Bolt Beranek and Newman (BBN), a Boston-based company, which was the prime contractor for building the Arpanet. He also wrote a program called readmail to open the email. His email programs have obviously been superseded in the last thirty years by others. But one thing that has survived is the @ sign to denote the computer address of a sender. Tomlinson was looking for a symbol to separate the receiver’s user name and the address of his host computer. When he looked at his Teletype, he saw a few punctuation marks available and chose @ since it had the connotation of ‘at’ among accountants, and did not occur in software programs in some other connotation".
(From Sand to Silicon: The amazing story of digital technology by Shivanand Kanavi, Rupa & Co 2007).

Tuesday, December 29, 2015

25 years of World Wide Web

Prajavani, Dec 23, 2015
https://t.co/BMj5QN1ngs
ವರ್ಲ್ಡ್‌ ವೈಡ್‌ ವೆಬ್‌ಗೆ ಬೆಳ್ಳಿ ಸಂಭ್ರಮ

ಪ್ರಪಂಚದಲ್ಲಿ ನಡೆಯುವ ಯಾವುದೇ ಮಹಾನ್‌ ಕ್ರಾಂತಿಯ ಮೊದಲ ಹೆಜ್ಜೆ ತುಂಬಾ ಚಿಕ್ಕದಿರುತ್ತದೆ, ನಂತರ ಅದು ತ್ರಿವಿಕ್ರಮಾಕಾರವಾಗಿ ಬೆಳೆದಿರುತ್ತದೆಎಂಬ ಮಾತಿದೆ. World Wide Web ಅಥವಾ ವಿಶ್ವವ್ಯಾಪಿ ಜಾಲದ ಹುಟ್ಟು ಕೂಡ ಹೀಗೆಯೇ. 90ರ ದಶಕದಲ್ಲಿ ಇಂಗ್ಲೆಂಡ್‌ನ ಗಣಕ ವಿಜ್ಞಾನಿ ತಿಮೊಥಿ ಜಾನ್‌ ಬರ್ನರ್ಸ್‌ ಲೀ (ಟಿಮ್‌ ಬರ್ನರ್ಸ್‌ ಲೀ) ಹೈಪರ್‌ ಟೆಕ್ಟ್ಸ್‌ ಟ್ರಾನ್ಸ್‌ಫರ್‌ ಪ್ರೋಟೊಕಾಲ್‌ (http) ತಂತ್ರಜ್ಞಾನ ಬಳಸಿಕೊಂಡು ಜಾಗತಿಕ ಜಾಲ ವ್ಯವಸ್ಥೆಯೊಂದನ್ನು (WWW) ಅಭಿವೃದ್ಧಿಪಡಿಸಿದಾಗ ಸ್ವತಃ ಅವರಿಗೇ ಇದು ನಾಳೆ ವಿಶ್ವವನ್ನೇ ಬದಲಿಸಬಲ್ಲಂತಹ ತಂತ್ರಜ್ಞಾನವಾಗಲಿದೆ ಎಂಬುದರ ಸಣ್ಣ ಕಲ್ಪನೆಯೂ ಇರಲಿಲ್ಲ.
ಹೌದು. ವಿಶ್ವದ ಅಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದ ಈ ತಂತ್ರಜ್ಞಾನಕ್ಕೆ ಮೊನ್ನೆ ಅಂದರೆ 2015, ನವೆಂಬರ್‌ 12ರಂದು 25 ವರ್ಷ ತುಂಬಿತು.  ಇಂಟರ್‌ನೆಟ್‌ ಎನ್ನುವುದು ಇಂದು ಬದುಕಿನ ಎಲ್ಲ ಆಯಾಮಗಳನ್ನು ಆವರಿಸಿಕೊಂಡು ಬಿಟ್ಟಿದೆ. ವರ್ಲ್ಡ್‌ ವೈಡ್‌ ವೆಬ್‌ ಅನ್ನು  (w3) ಮಾನವನ ಜ್ಞಾನದ ಭಂಡಾರ ಎಂದೇ ಬಣ್ಣಿಸಲಾಗುತ್ತದೆ. ಇಂಟರ್‌ನೆಟ್‌ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಇವೆರಡು ಪದಗಳನ್ನು ಕೆಲವೊಮ್ಮೆ ಸಮನ್ವಯಗೊಳಿಸಲಾಗುತ್ತದೆಯಾದರೂ, ಎರಡರ ಅರ್ಥ ಒಂದೇ ಅಲ್ಲ.
ವಿಶ್ವವ್ಯಾಪಿ ಜಾಲವನ್ನು ಹೈಪರ್‌ಲಿಂಕ್‌ಗಳು ಮತ್ತು ಯುಆರ್‌ಎಲ್‌ಗಳಿಂದ ಸಂಪರ್ಕಿಸಲಾಗಿರುತ್ತದೆ. ಈ ತಂತ್ರಜ್ಞಾನದಿಂದಾಗಿಯೇ ನಾವು ಇಂಟರ್‌ನೆಟ್‌ನಲ್ಲಿ ಏನೇ ಮಾಹಿತಿ  ಹುಡುಕಿದರೂ ಕ್ಷಣಾರ್ಧದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಸಾವಿರಾರು ಕೊಂಡಿಗಳು ತೆರೆದುಕೊಳ್ಳುವುದು. ಬರ್ನಸ್‌ ಲೀ ಅವರ ಸಂಶೋಧನೆ ಮಹತ್ವ ಪಡೆದುಕೊಳ್ಳುವುದು ಇಲ್ಲಿಯೇ. 60ರ ದಶಕದಲ್ಲೇ ಇಂಟರ್‌ನೆಟ್‌ ವ್ಯವಸ್ಥೆ ಅಭಿವೃದ್ಧಿಗೊಂಡಿದ್ದರೂ ಅದನ್ನು ಒಂದು ಸಣ್ಣ ಕ್ಲಿಕ್‌ನಲ್ಲಿ ಜನಸಾಮಾನ್ಯನ ಬೆರಳುಗಳಿಗೆ ವರ್ಗಾಯಿಸಿದ ಹೆಗ್ಗಳಿಕೆ ಲೀ ಅವರದ್ದು.
ಬರ್ನಸ್‌ ಲೀಈ ಮಹತ್ವದ  ಸಂಶೋಧನೆಗೆ ಮುನ್ನುಡಿ ಬರೆಯುವಾಗ ಜಿನಿವಾದಲ್ಲಿರುವ ಯೂರೋಪ್‌ ಪರಮಾಣು ಸಂಶೋಧನೆ ಕೇಂದ್ರದಲ್ಲಿ (ಸಿಇಆರ್‌ಎನ್‌) ಭೌತವಿಜ್ಞಾನಿಯಾಗಿದ್ದರು.  ಆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆಗಳ ದತ್ತಾಂಶ, ಆಕರ ಮಾಹಿತಿಗಳು, ಸಂಶೋಧಕರ ಹೆಸರು ಸೇರಿದಂತೆ ಬೃಹತ್‌ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡಲು ಮತ್ತು ಸುಲಭವಾಗಿ ಸಿಗುವಂತೆ ಮಾಡಲು  ಹೈಪರ್‌ ಟೆಕ್ಟ್‌ (Hyper Text–http) ಎಂಬ ಯೋಜನೆ ಸಿದ್ಧಪಡಿಸಲು ಮುಂದಾದರು.
ಇದನ್ನು ವಿವರಿಸಿ ತಮ್ಮ ಮೇಲಧಿಕಾರಿಗಳಿಗೆ ಅವರು ಇಮೇಲ್‌ (http://goo.gl/ooiNn) ಮಾಡಿದರು. ಸಿಇಆರ್‌ಎನ್‌ಸರ್ವರ್‌ ಬಳಸಿಕೊಂಡೇ ಇದನ್ನು ಎರಡು ಹಂತಗಳಲ್ಲಿ  ಜಾರಿಗೆ ತರಬಹುದು. ಮೊದಲ ಹಂತದಲ್ಲಿ ಈ ಎಲ್ಲ ಮಾಹಿತಿಗಳನ್ನು ಈಗಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ ಬಳಸಿಕೊಂಡು ಬ್ರೌಸರ್‌ ಮೂಲಕ  ಪರ್ಸನಲ್‌ ಕಂಪ್ಯೂಟರ್‌ಗಿಂತ ಪ್ರಬಲವಾದ ವರ್ಕ್‌ಸ್ಟೇಷನ್‌ನಲ್ಲಿ ಪಡೆದುಕೊಳ್ಳುವಂತೆ ಮಾಡುವುದು, ಎರಡನೆಯದಾಗಿ ಬಳಕೆದಾರನಿಗೆ ಈ  ಮಾಹಿತಿ ಭಂಡಾರದಲ್ಲಿ ಹೊಸ ವಿಷಯಗಳನ್ನು ಸೇರಿಸಲು ಮತ್ತು ಲಭ್ಯವಿರುವ ಮಾಹಿತಿಗಳಲ್ಲಿ ಲೋಪವಿದ್ದರೆ ಪರಿಷ್ಕರಿಸಲು ಅವಕಾಶ ಮಾಡಿಕೊಡಲು ಹೊಸ ಪ್ರೊಗ್ರಾಂ ಒಂದನ್ನು ಅಭಿವೃದ್ಧಿಪಡಿಸುವುದು.
ಸಂಸ್ಥೆಯು ನಾಲ್ವರು  ಸಾಫ್ಟ್‌ವೇರ್‌  ಎಂಜಿನಿಯರ್‌ ಮತ್ತು ಒಬ್ಬ ಪ್ರೊಗ್ರಾಮರ್‌ ನೆರವು ಕೊಟ್ಟರೆ ಇವೆರಡೂ ಯೋಜನೆಗಳನ್ನು ಕ್ರಮವಾಗಿ ಮೂರು ತಿಂಗಳ ಕಾಲಾವಧಿಯಲ್ಲಿ ಜಾರಿಗೆ ತರುವುದಾಗಿ ಲೀ ವಿವರಿಸಿದ್ದರು. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಅವರು ನಡೆಸಿದ ಸಂಶೋಧನೆಗಳು ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆದವು. ವರ್ಲ್ಡ್‌ ವೈಡ್‌ ವೆಬ್‌ ಎನ್ನುವ ವಿಶ್ವವ್ಯಾಪಿ ಜಾಲದ ಉಗಮದ ಮೊದಲ ಹೆಜ್ಜೆ ಅದಾಗಿತ್ತು.
ಸದ್ಯಕ್ಕೆ ಭಾರತದಲ್ಲಿನ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯು ಅಮೆರಿಕವನ್ನು ಹಿಂದಿಕ್ಕುತ್ತಿದೆ. ಪರ್ಸನಲ್‌ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ ಹೀಗೆ ಒಂದಿಲ್ಲೊಂದು ಗ್ಯಾಡ್ಜೆಟ್‌ಗಳ ಮೂಲಕ ನಾವೂ ಈ ವಿಶ್ವಜಾಲದ ಭಾಗಗಳಾಗಿದ್ದೇವೆ. ಇಂಟರ್‌ನೆಟ್‌ ಎಂಬ ಬೃಹತ್‌ ಗ್ರಂಥಾಲಯ ಜನರ ಬೆರಳ ತುದಿಗೆ ದೊರೆತಿದೆ. ಪ್ರಪಂಚದ ಒಂದು ತುದಿಯಲ್ಲಿದ್ದವರನ್ನು ಇನ್ನೊಂದು ತುದಿಯಲ್ಲಿದ್ದವರ ಜತೆ ಕ್ಷಣಾರ್ಧದಲ್ಲಿ ಸಂಪರ್ಕಿಸುವ, ಯಾವುದೇ ಸ್ವರೂಪದ (ಪಠ್ಯ, ಚಿತ್ರ, ಧ್ವನಿ, ದೃಶ್ಯ) ಮಾಹಿತಿಗಳನ್ನು ಆ ಕ್ಷಣವೇ ಹುಡುಕಿಕೊಡುವತತ್‌ಕ್ಷಣದ, ಅಗ್ಗದ ಸಂವಹನ ಮಾಧ್ಯಮವಾಗಿಯೂ ಇಂಟರ್‌ನೆಟ್‌ ಪ್ರವರ್ಧಮಾನಕ್ಕೆ ಬಂದಿದೆ.
ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆ, ಷೇರು ಮಾರುಕಟ್ಟೆ, ಕೃಷಿ ಉತ್ಪನ್ನ ವಹಿವಾಟು ಹೀಗೆ ಪ್ರತಿಯೊಂದೂ ವ್ಯವಹಾರ ಇಂಟರ್‌ನೆಟ್‌ ಆಧರಿಸಿ ನಡೆಯುತ್ತಿದೆ. ಭಾರತದಂತಹ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಕಂಡುಬರುತ್ತಿರುವ ತೀವ್ರಗತಿಯ ಏರಿಕೆಯು ಇಂಟರ್‌ನೆಟ್‌ ಹರಿವಿನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದರಲ್ಲೂ ಮೊಬೈಲ್‌ ಇಂಟರ್‌ನೆಟ್‌ ಜನಪ್ರಿಯತೆಯಿಂದಾಗಿ ಪ್ರತಿ ತಿಂಗಳು ದಶಲಕ್ಷ ಸಂಖ್ಯೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು  ಮಾರಾಟವಾಗುತ್ತಿವೆ.  ಪರ್ಸನಲ್‌ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಮಾರಾಟದಲ್ಲೂ ಗಣನೀಯ ಏರಿಕೆ ಕಂಡುಬರುತ್ತಿವೆ.
ನಮ್ಮ ಹಿರಿಯರು ಹೇಳುವಂತೆ ಪ್ರತಿಯೊಂದು ಬೃಹತ್‌ ಆಲದ ಮರವೂ  ಅತ್ಯಂತ ಸಾಧಾರಣ ಹುಟ್ಟಿನ ಮೂಲವನ್ನು ಹೊಂದಿರುತ್ತದೆಎನ್ನುವಂತೆ, ವರ್ಲ್ಡ್‌ ವೈಡ್‌ ವೆಬ್‌ನ ಉಗಮ ಕೂಡ ತೀರಾ ಸಾಮಾನ್ಯವಾದದ್ದು. ಲೀ ಬಿತ್ತಿದ ಈ ವಿಶ್ವವ್ಯಾಪಿ ಜಾಲದ ಬೀಜಗಳು ಇಂದು  ಹೆಮ್ಮರವಾಗಿ ಬೆಳೆದು ನಿಂತಿದೆ. ಇಂಟರ್‌ನೆಟ್‌  ಇತಿಹಾಸವನ್ನು ಒಮ್ಮೆ ತೆರೆದು ನೋಡಿದರೂ ಸಾಕು ನಮಗೆ ಲೀ ಅವರ ಕೊಡುಗೆಯ ಮಹತ್ವ  ಅರ್ಥವಾಗುತ್ತದೆ. ಇಂಟರ್‌ನೆಟ್‌ನ ಮೂಲ ಸಂಶೋಧನೆ ಇವರಲ್ಲದಿರಬಹುದು. ಆದರೆ, ಅದರ ಬಳಕೆಯನ್ನು ಸಾರ್ವತ್ರಿಕಗೊಳಿಸಿದ ಕೀರ್ತಿ ಅವರಿಗೇ  ಸಲ್ಲಬೇಕು.
ಅಮೆರಿಕದ ರಕ್ಷಣಾ ಇಲಾಖೆಗೆ ಸೇರಿದ ಅಡ್ವಾನ್ಸ್ಡ್‌ ರೀಸರ್ಚ್‌ ಪ್ರಾಜೆಕ್ಟ್ಸ್‌ ಏಜೆನ್ಸಿ (ARPA) 60ರ ದಶಕದಿಂದಲೇ ಗಣಕ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದೆ. ಅರ್ಪಾದಲ್ಲಿದ್ದ  ಜೆ.ಸಿ.ಆರ್‌. ಲಿಕ್ಲಿಡರ್‌ ಅಮೆರಿಕದಲ್ಲಿನ ಹಲವು ವಿಶ್ವವಿದ್ಯಾಲಗಳ ಸಹಯೋಗದಲ್ಲಿ ಇಂತಹ ಸಂಶೋಧನೆಗಳನ್ನು ಉತ್ತೇಜಿಸಲು ಮುಂದಾಳತ್ವ ವಹಿಸಿದರು. ಹೆಚ್ಚೂಕಡಿಮೆ ಒಂದೇ ವಿಷಯದ ಮೇಲೆ ಹಲವು ಸಂಶೋಧನಾ ತಂಡಗಳು ಅಧ್ಯಯನ ನಡೆಸುತ್ತಿದ್ದರೂ ಸುಲಭವಾಗಿ ಪರಸ್ಪರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು, ದತ್ತಾಂಶಗಳನ್ನು ಹಂಚಿಕೊಳ್ಳಲು ಸಮರ್ಪಕವಾದ ವ್ಯವಸ್ಥೆ ಇರಲಿಲ್ಲ. ಹೀಗೆ  ಕಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಕಡತಗಳನ್ನು ರವಾನಿಸಬಹುದಾದ ಸಾಧ್ಯತೆಗಳ ಕುರಿತು ನಡೆದ ಸಂಶೋಧನೆಗಳ ಫಲವಾಗಿ ಹುಟ್ಟಿಕೊಂಡದ್ದೇ  ಅರ್ಪಾನೆಟ್‌.
ಇದು ವಾಸ್ತವ. ಆದರೆ, ಮೊದಲ ಕಂಪ್ಯೂಟರ್‌ ನೆಟ್‌ವರ್ಕ್‌ ಬಳಕೆಯ ಸಾಧ್ಯತೆಯ ಹೊಳಹು ಹೊಳೆದದ್ದು ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಪರಮಾಣು  ಯುದ್ಧದ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ. ಆದರೆ, ಇದು ಕೇಂದ್ರೀಕೃತ ನೆಟ್‌ವರ್ಕ್‌  ವ್ಯವಸ್ಥೆಯಾದರೆ, ಕಂಪ್ಯೂಟರ್‌ ಆಧಾರಿತ ಈ ನಿಯಂತ್ರಣ ವ್ಯವಸ್ಥೆಯನ್ನು ಕ್ಷಿಪಣಿ ದಾಳಿ ಮೂಲಕ ನಾಶಪಡಿಸುವ ಸಾಧ್ಯತೆ ಇತ್ತು. ಹೀಗಾಗಿ ಕ್ಷಿಪಣಿ ದಾಳಿ ನಡೆದರೂ ಅದರಿಂದ ರಕ್ಷಿಸಿಕೊಳ್ಳಬಲ್ಲಂತಹ  ವಿಕೇಂದ್ರೀಕೃತ ನೆಟ್‌ವರ್ಕ್‌ ಕಲ್ಪನೆ ಪ್ರಸ್ತಾವವನ್ನು ರ್‍ಯಾಂಡ್‌ ಕಾರ್ಪೊರೇಷನ್‌ನ ಪೌಲ್‌ ಬಾರನ್‌ ಮುಂದಿಟ್ಟರು. ಆಗಿನ್ನೂ ಶತ್ರು ದೇಶದ ಮೇಲೆ ಎರಡು ಮೂರು ದೇಶಗಳು ಒಟ್ಟಾಗಿ ಸೇರಿಕೊಂಡು ಪರಸ್ಪರ ಸಹಕಾರದ ಮೇಲೆ ದಾಳಿ ನಡೆಸುವ ಕಲ್ಪನೆ ಸಾಕಾರಗೊಂಡಿರಲಿಲ್ಲ.
ಪ್ಯಾಕೆಟ್‌ ಸ್ವಿಚ್ಚಿಂಗ್‌ ಆಧರಿಸಿದ ಮೊದಲ ಕಂಪ್ಯೂಟರ್‌ ನೆಟ್‌ವರ್ಕ್‌ 1966 ಮತ್ತು 1972ರ ನಡುವೆ ಅಮೆರಿಕದಲ್ಲಿ ಅಭಿವೃದ್ಧಿಯಾಯಿತು. ಈ ಜಾಲದ ಮೂಲಕ ಒಂದು ನಿರ್ದಿಷ್ಟ ಬಳಕೆದಾರರ ಸಮೂಹ ಪರಸ್ಪರ ಕಡತಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಯಿತು. ಇದರ ಬೆನ್ನಿಗೇ ಪರಸ್ಪರ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳಲು ಇಮೇಲ್‌ ಎನ್ನುವ ಎಲೆಕ್ಟ್ರಾನಿಕ್‌ ಮೇಲ್‌  ಬಳಕೆಗೆ ಬಂತು. 1967ರಿಂದ 1974ರವೆರೆಗೆ ಎಂಐಟಿನಲ್ಲಿ ಅರ್ಪಾನೆಟ್‌ ಯೋಜನೆಯಲ್ಲಿ ಕೆಲಸ ಮಾಡಿದ ಅಭಯ್‌ ಭೂಷಣ್‌, ಎಫ್‌ಟಿಪಿ ಅಥವಾ ಫೈಲ್‌ ಟ್ರಾನ್ಸ್‌ಫರ್‌ ಪ್ರೋಟೊಕಾಲ್‌ ಬಗ್ಗೆ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದರು. ಇದೇ ಎಫ್‌ಟಿಪಿಯೇ ಇಮೇಲ್‌ನ ಉಗಮಕ್ಕೆ ಕಾರಣ.  ಮೇಲ್‌ನ ಮೂಲ ಸಂಶೋಧಕ ಎಂದು ಇವರನ್ನು ಗುರುತಿಸಲಾಗುತ್ತದೆ.
70ರ ದಶಕದಲ್ಲಿ ಅರ್ಪಾನೆಟ್‌ ಜನಪ್ರಿಯತೆ ಹೆಚ್ಚಿತು. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು  ಸಂಶೋಧನಾ ಸಂಸ್ಥೆಗಳನ್ನು ಅರ್ಪಾನೆಟ್‌ ಜತೆ ಸಂಪರ್ಕಿಸಬೇಕು ಎನ್ನುವ ಮಾತುಗಳು ಕೇಳಿಬಂದವು. ಆದರೆ, ಅಂತರ್‌ ಸಂಪರ್ಕಿತ ಕಂಪ್ಯೂಟರ್‌ ಜಾಲಗಳ ಒಂದು ಜಾಗತಿಕ ವ್ಯವಸ್ಥೆ ಅರ್ಥಾತ್‌ ಇಂಟರ್‌ನೆಟ್‌ ಅಭಿವೃದ್ಧಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಯೂ ಉದ್ಭವಿಸಿತು. ಟ್ರಾನ್ಸ್‌ಮಿಷನ್‌ ಕಂಟ್ರೋಲ್‌ ಪ್ರೋಟೊಕಾಲ್ ಅಥವಾ ಟಿಸಿಪಿ ಎಂದು ಕರೆಯುವ ತಂತ್ರಜ್ಞಾನದ ಮೂಲಕ ರಾಬರ್ಟ್‌ ಖಾನ್  ಮತ್ತು ವಿಂಟನ್‌ ಕರ್ಫ್‌ ಇದಕ್ಕೆ ಪರಿಹಾರ ಕಂಡುಹಿಡಿದರು. ಇವರನ್ನು ಇಂಟರ್‌ನೆಟ್‌ನ ಸೃಷ್ಟಿಕರ್ತರು ಎಂದು ಸ್ಮರಿಸಿಕೊಳ್ಳಲಾಗುತ್ತದೆ.

ವಿಂಟನ್ ಸರ್ಫ಼್ ಜೊತೆ ಶಿವಾನಂದ ಕಣವಿ
ಈ ಕಾಲದಲ್ಲೇ ಅಂದರೆ 1971ರಲ್ಲಿ ಐಐಟಿ ಮುಂಬೈನ  ಯೋಗನ್‌ ದಲಾಲ್‌ ಎಂಬ ಸ್ನಾತಕಪೂರ್ವ ವಿದ್ಯಾರ್ಥಿ, ಎಂಎಸ್‌ ಮತ್ತು ಪಿಎಚ್‌.ಡಿ ಅಧ್ಯಯನಕ್ಕಾಗಿ ಸ್ಟ್ಯಾನ್‌ಫೋರ್ಡ್‌ ಸೇರಿದರು. 1974ರಲ್ಲಿ ವಿಂಟನ್‌ ಕರ್ಫ್‌, ಯೋಗನ್‌ ದಲಾಲ್‌ ಮತ್ತು ಕಾರ್ಲ್‌ ಸನ್‌ಶೈರ್‌ ಸೇರಿಕೊಂಡು ಸುಧಾರಿತ ಟಿಸಿಪಿ ಮತ್ತು ಇಂಟರ್‌ನೆಟ್‌ ಪ್ರೋಟೊಕಾಲ್‌ಗೆ (ಐಪಿ) ಸಂಬಂಧಿಸಿದ ಕೆಲವು ಮಾನದಂಡಗಳನ್ನು ನಿಗದಿಪಡಿಪಡಿಸುತ್ತಾರೆ. ಇವರು ಪ್ರಸ್ತಾಪಿದ ಅಂಶವೇ ನಂತರ ಇಂಟರ್‌ನೆಟ್‌ಗೆ ಮಾನದಂಡವಾಯಿತು.
ಇಷ್ಟೆಲ್ಲಾ ಸಂಶೋಧನೆಗಳು ನಡೆದರೂ ಇಂಟರ್‌ನೆಟ್‌  ಅನ್ನು ಸಂಪೂರ್ಣವಾಗಿ ಬದಲಿಸಿದ್ದು 90ರ ದಶಕದಲ್ಲಿ ಅಭಿವೃದ್ಧಿಗೊಂಡ ವರ್ಲ್ಡ್‌ ವೈಡ್‌ ವೆಬ್‌ ಮತ್ತು ಬ್ರೌಸರ್‌ ಎಂಬ ಸಣ್ಣ ಪ್ರೋಗ್ರಾಂ. ಭಾರತೀಯರು ಈ ಹೈಪರ್‌ಲಿಂಕ್‌ ಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಯಾಕೆಂದರೆ ಮಹಾಭಾರತ, ರಾಮಾಯಣ, ಕಥಾಸರಿತ್ಸಾಗರ, ಪಂಚತಂತ್ರ, ವಿಕ್ರಮ ಮತ್ತು ಬೇತಾಳ ಮತ್ತಿತರ ಕಥೆಗಳಲ್ಲಿ ಹೇಗೆ ನೂರಾರು ಉಪಕಥೆಗಳು ಇರುತ್ತವೆಯೋ, ಹೈಪರ್‌ ಲಿಂಕಿಂಗ್‌ ಕೂಡ ಹೀಗೆಯೇ. ಅಂದರೆ ಎಚ್‌ಟಿಪಿಪಿ ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್‌ನಲ್ಲಿ ಜೇಡರ ಬಲೆಯಂತೆ ಮಾಹಿತಿ ಬೆಸೆದುಕೊಂಡಿರುತ್ತದೆ. ಒಂದು ಮಾಹಿತಿ ಹುಡುಕಿದರೆ ಅದಕ್ಕೆ ಸಂಬಂಧಿಸಿದ ಸಾವಿರಾರು ಪೂರಕ ಮಾಹಿತಿಗಳ ಕೊಂಡಿಗಳು ತೆರೆದುಕೊಳ್ಳುತ್ತವೆ.
ಅಸಲಿಗೆ ಟಿಮ್‌ ಬರ್ನಸ್‌ ಲೀ ಸಿಇಆರ್‌ಎನ್‌ನಲ್ಲಿ ಕಡತಗಳನ್ನು ವಿದ್ಯುನ್ಮಾನವಾಗಿ ಪರಸ್ಪರ ಸಂಪರ್ಕಕ್ಕೆ ತರಲು ಇರುತ್ತಿದ್ದ ಸಮಸ್ಯೆಯನ್ನು ನಿವಾರಿಸಲು ಈ ಸಂಶೋಧನೆ ಕೈಗೊಂಡರು. ಹೈಪರ್‌ಲಿಂಕ್ಡ್‌ ವೆಬ್‌ ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು ವಿವರಿಸಿ ಅವರು ಮೇಲಧಿಕಾರಿಗಳಿಗೆ ಬರೆದ ಮನವಿಗೆ ಮಾಹಿತಿ ನಿರ್ವಹಣೆ: ಒಂದು ಪ್ರಸ್ತಾವಎಂದು ಕರೆದಿದ್ದರು. ಲೀ ಅವರ ಮನವಿಗೆ ಅವರ ಮೇಲಧಿಕಾರಿ ಯಾಕಾಗಬಾರದು? ಎಂಬ ಜನಪ್ರಿಯ ಉತ್ತರ ನೀಡಿದ್ದರೆ  ಅವರ ಸಂಶೋಧನೆ ಸಿಇಆರ್‌ಎನ್‌ಗೆ ಮಾತ್ರ ಸೀಮಿತಗೊಳ್ಳುತ್ತಿತ್ತೇನೋ?
ಆದರೆ, ಅವರ ಮೇಲಧಿಕಾರಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಪರಿಣಾಮ, ಲೀ ತಮ್ಮ ಸಂಶೋಧನೆಯನ್ನು ಜನರೆದುರು ತೆರೆದಿಟ್ಟರು. ಈ ಅನಂತ ಸಾಧ್ಯತೆಯನ್ನು ಇಂಟರ್‌ನೆಟ್‌ ಸಮುದಾಯ ಬಹುಬೇಗ ಗ್ರಹಿಸಿಕೊಂಡಿತು. ವರ್ಲ್ಡ್‌ ವೈಡ್‌ ವೆಬ್‌ ಎಂಬ ಅನಂತ ಸಾಧ್ಯತೆ ಅನಾವರಣಗೊಂಡಿತು.
ಟಿಮ್‌ ತಮ್ಮ ಸಂಶೋಧನೆಗೆ ಒಂದು ನಯಾಪೈಸೆ ಸಂಭಾವನೆಯನ್ನೂ ಪಡೆಯಲಿಲ್ಲ. ಹಕ್ಕುಸ್ವಾಮ್ಯ ಪಡೆದುಕೊಳ್ಳಲೂ ನಿರಾಕರಿಸಿದರು. ಈಗಲೂ ಅವರು ಇಂಟರ್‌ನೆಟ್‌ನ ಮುಂದಿನ ತಲೆಮಾರಿನ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.  1994ರಲ್ಲಿ ಅವರಿಗೆ ಅಮೆರಿಕದ ಎಂಐಟಿಯಿಂದ ಕರೆ ಬಂತು.  ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು. ಹೌದು ವರ್ಲ್ಡ್‌ ವೈಡ್ ವೆಬ್ ಕನ್ಸೋರ್ಟಿಯಂನ  (W3C) ಅಧ್ಯಕ್ಷರಾಗಿ ಅವರು ಈಗಲೂ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

--------------------------------------------------------------------------